ಅಧ್ಯಕ್ಷರಾಗಿ ಜೆ.ಆರ್.ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕೆಜಿ ಸುರೇಶ್ ಆಯ್ಕೆ
ಹಾಸನ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಜೆ.ಆರ್.ಕೆಂಚೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆ.ಜಿ. ಸುರೇಶ್ ಆಯ್ಕೆಯಾದರು.
ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಭಾನುವಾರ ಸಂಘದ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ಪತ್ರಕರ್ತ ಜೆ.ಆರ್.ಕೆಂಚೇಗೌಡ ಅವರು ಅತಿ ಹೆಚ್ಚು 201 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದರು. ಇವರ ಪ್ರತಿಸ್ಪರ್ಧಿ ಕೆ.ಎಚ್.ವೇಣುಕುಮಾರ್ ಕೇವಲ 81 ಮತಗಳನ್ನು ಪಡೆದು ಪರಾಭವಗೊಂಡರು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಾಸನ ವಿಜಯ ಪತ್ರಿಕೆ ಸಂಪಾದಕ ಕೆ.ಜಿ. ಸುರೇಶ್, ಬಿ.ಸಿ.ಶಶಿಧರ್ ಹಾಗೂ ಜೋಸೆಫ್ ಅವರ ನಡುವೆ ತ್ರಿಕೋನ ಸ್ಪರ್ಧೆ ಏಪಟ್ಟಿತ್ತು.
ಇವರಲ್ಲಿ ಕೆ.ಜಿ ಸುರೇಶ್ ಅವರು 179 ಮತಗಳನ್ನು ಪಡೆದು ವಿಜೇತರಾದರೆ, ಬಿ.ಸಿ. ಶಶಿಧರ್ 90 ಮತ ಹಾಗೂ ಜೋಸೆಫ್ ಕೇವಲ 12 ಮತಗಳನ್ನು ಪರಾಭವಗೊಂಡರು.
ಮೂವರು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ಪತ್ರಕರ್ತರಾದ ನಂಜುಂಡೇಗೌಡ (225) ಹಾಗೂ ಜಿ. ಪ್ರಕಾಶ್ ( 221) ಪಡೆದು ಭರ್ಜರಿ ಗೆಲು ಪಡೆದರೆ ಮತ್ತೊಂದು ಸ್ಥಾನಕ್ಕಾಗಿ ಎಚ್.ಟಿ.ಮೋಹನ್ ಹಾಗೂ ನಾಗರಾಜ್ ಹೆತ್ತೂರು ನಡುವೆ ತೀವ್ರ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟು ಕೊನೆಗೆ ಎಚ್.ಟಿ. ಮೋಹನ್ ಕೇವಲ 3 ಮತಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು.
ಮೂವರು ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಖುಷ್ಪಂತ್ 188, ಬಿ.ಆರ್.ಬೊಮ್ಮೇಗೌಡ 210 ಮತ ಹಾಗೂ ಸುವರ್ಣ ಹರೀಶ್ 178 ಭರ್ಜರಿ ಗೆಲವು ಸಾಧಿಸಿದರೆ, ವೆಂಕಟೇಶ್ ಬ್ಯಾಕರವಳ್ಳಿ 72 ಮತ, ಸಿ.ಎನ್.ನಾಗರಾಜ್ 68 ಮತ ಹಾಗೂ ಸಿ.ಬಿ.ಸಂತೋಷ್ 81 ಮತ ಪಡೆದು ಪರಾಭವಗೊಂಡರು.
ಖಜಾಂಚಿ ಸ್ಥಾನಕ್ಕೆ ಪಿ.ಎ.ಶ್ರೀನಿವಾಸ್ ಹಾಗೂ ಟಿ.ವಿ.5 ಪ್ರಕಾಶ್ ನಡುವೆ ಸ್ಪರ್ಧೆ ನಡೆದು ಟಿ.ವಿ5 ಪ್ರಕಾಶ್ 189 ಮತಗಳನ್ನು ಪಡೆದು ವಿಜೇತರಾದರೆ, ಶ್ರೀನಿವಾಸ್ ಅವರು ಕೇವಲ 85 ಮತಗಳನ್ನು ಪಡೆಯಲು ಶಕ್ತರಾದರು.
ಇನ್ನು 15 ಮಂದಿ ಕಾರ್ಯಕಾರಿ ಸಮಿತಿ ಸ್ಥಾನಕ್ಕೆ 22 ಮಂದಿ ಸ್ಪರ್ಧೆ ಮಾಡಿದ್ದರು. ಇವರಲ್ಲಿ ಜೆ.ಆರ್.ಕೆಂಚೇಗೌಡ ಅವರ ತಂಡದ ಕಾರ್ಯಕಾರಿ ಸಮಿತಿ ಪಟ್ಟ
ಜನಮಿತ್ರ ಪತ್ರಿಕೆ ಸಂಪಾದಕ ಸಿ.ಆರ್. ನವೀನ್ (218), ಶರಣ್ ಜಿ ನಾಡಸಹ್ಯಾದ್ರಿ(227), ಕೃಷ್ಣ ಇಬ್ಬೀಡು (198), ಜಗದೀಶ್ ಚೌಡುವಳ್ಳಿ (200) , ಪಬ್ಲಿಕ್ ಎಕ್ಸ್ಪ್ರೆಸ್ ನಾಗರಾಜು (198), ಪ್ರತಾಪ್ ಹಿರೀಸಾವೆ (179), ಚಲಂ ಹಾಡ್ಲಹಳ್ಳಿ (205) ರಾಘವೇಂದ್ರ ಆಲೂರು (187), ಮಲ್ಲೇಶ್ ಬೇಲೂರು (193), ವಿರೂಪಾಕ್ಷ ಅರಕಲಗೂಡು (181), ಸುವರ್ಣ ಶರತ್ (195) ಸುರೇಶ್ ಕುಮಾರ್ (155) ಸ್ವರೂಪ್ (212, ವಿಶ್ವನಾಥ್(169) ಹಾಗೂ ಪ್ರಕಾಶಮಾನ ಪತ್ರಿಕೆಯ ಸ್ವಾಗತ್ (129) ವಿಜೇತರಾದರು.
ದಾಖಲೆಯ ಮತದಾನ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ. 99 ರಷ್ಟು ಮತದಾನವಾಯಿತು. ಒಟ್ಟು 289 ಮತಗಳ ಪೈಕಿ 287 ಮತಗಳು ಚಲಾವಣೆಯಾದವು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಮಧ್ಯಾಹ್ನ ೩ ಗಂಟೆ ವರೆಗೂ ನಡೆಯಿತು. ಬೆಳಗ್ಗಿನಿಂದಲೇ ಸರದಿ ಸಾಲಿನಲ್ಲಿ ನಿಂತು ಪತ್ರಕರ್ತರು ಮತದಾನ ಮಾಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದ ಶಾಂತಿಯುತವಾಗಿ ಮತದಾನ ನಡೆಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಜಿಲ್ಲಾ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ರಾಜೇಶ್ ಹಾಗೂ ಮೋಹನ್ ಕಣತೂರು ಕಾರ್ಯನಿರ್ವಹಿಸಿದರು.

