21
ಹಾಸನ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು ವತಿಯಿಂದ ಹಾಸನದ ಪ್ರಾದೇಶಿಕ ಕೇಂದ್ರದಲ್ಲಿ 2025-26ನೇ ಸಾಲಿನ ಜನವರಿ ಆವೃತ್ತಿ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಎಲ್.ಐ.ಸಿ, ಬಿ,ಎಸ್,ಡಬ್ಲೂ. ಎಂ.ಎ, ಎಂ.ಕಾಂ, ಎಂ.ಎಸ್ಸಿ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಏ.10 ವರೆಗೆ ವಿಸ್ತರಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಿದ್ದಾರ್ಥ್ ಬಿ.ಎನ್, ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರ, ಅರಸೀಕೆರೆ ರಸ್ತೆ, ಕೇಂದ್ರಿಯ ವಿದ್ಯಾಲಯ ಹಾಗೂ ಬಿ.ಟಿ.ಕೊಪ್ಪಲು ಹತ್ತಿರ, ದೊಡ್ಡಪುರ ಅಂಚೆ, ಎಸ್.ಎಂ. ಕೃಷ್ಣನಗರ, ಹಾಸನ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08172-262726, 8618929376, 9035378321 .

