Home Uncategorized ಹಸೆಮಣೆ ಏರಬೇಕಿದ್ದ ಯುವಕ ವಿಧಿಯಾಟಕ್ಕೆ ಬಲಿ: ಮದುವೆ ಮನೆಯಲ್ಲಿ ಆಕ್ರಂದನ

ಹಸೆಮಣೆ ಏರಬೇಕಿದ್ದ ಯುವಕ ವಿಧಿಯಾಟಕ್ಕೆ ಬಲಿ: ಮದುವೆ ಮನೆಯಲ್ಲಿ ಆಕ್ರಂದನ

ಪ್ರಿ ವೆಡ್ಡಿಂಗ್ ಶೂಟ್ ಗಾಗಿ ಭಾವಿ ಪತ್ನಿಯನ್ನು ಕರೆತರಲು ಹೋಗುವಾಗ ಮರಕ್ಕೆ ಅಪ್ಪಳಿಸಿದ ಕಾರ

by Editor

​ಹಾಸನ: ಐದಾರು ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ, ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಎಂಬಲ್ಲಿ ನಡೆದಿದೆ.
​ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗುವ ಆಸೆಯೇ ಕೊನೆಯಾಯಿತು.
​ಮೃತ ಯುವಕನನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಎಲ್‌ಎನ್ ಎಂದು ಗುರುತಿಸಲಾಗಿದೆ. ಮನು ಅವರ ಮದುವೆಯು ಇದೇ ಬರುವ ಭಾನುವಾರ, ಮೇ 10, 2026 ರಂದು ನಿಶ್ಚಯವಾಗಿತ್ತು. ಮದುವೆಗೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದವು. ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ತನ್ನ ಮದುವೆಯ ಸವಿನೆನಪಿಗಾಗಿ ‘ಪ್ರೀ ವೆಡ್ಡಿಂಗ್ ಶೂಟ್’ (Pre-wedding shoot) ಮಾಡಿಸಿಕೊಳ್ಳಬೇಕೆಂಬ ಹಂಬಲ ಮನುವಿಗಿತ್ತು. ಈ ಕಾರಣಕ್ಕಾಗಿ ಹುಡುಗಿಯನ್ನು ಕರೆತರಲು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವಿಧಿ ತನ್ನ ಆಟವಾಡಿದೆ.
​ಮರಕ್ಕೆ ಅಪ್ಪಳಿಸಿದ ಕಾರು: ಸ್ಥಳದಲ್ಲೇ ಸಾವು
​ಸಕಲೇಶಪುರ ತಾಲ್ಲೂಕಿನ ಮೂಗಲಿ ಎಂಬಲ್ಲಿ ಮನು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಮನು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಂದರ ಕನಸುಗಳನ್ನು ಹೊತ್ತು ಮದುವೆಯ ತಯಾರಿಯಲ್ಲಿದ್ದ ಯುವಕ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.
​ಹಸೆಮಣೆಯ ಬದಲು ಸ್ಮಶಾನಕ್ಕೆ ಪಯಣ
​ಯಾವ ಮನೆಯಲ್ಲಿ ಮದುವೆ ಮಂತ್ರಗಳು ಮೊಳಗಬೇಕಿತ್ತೋ, ಅಲ್ಲಿಂದು ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರ*ದನ ಮುಗಿಲು ಮುಟ್ಟಿದೆ. ಮಗಳನ್ನ ಕರೆತರಲು ಹೋದ ಮಗ ಬಾರದ ಲೋಕಕ್ಕೆ ತೆರಳಿದ್ದಾನೆ ಎಂಬ ಸುದ್ದಿ ಕೇಳಿ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆಯಲ್ಲಿ ಮೌನ ಆವರಿಸಿದೆ.

 

You may also like

Leave a Comment