Home ಜಿಲ್ಲೆಹಾಸನ ಅಂಬೇಡ್ಕರ್ ಪ್ರತಿಮೆ ಎದುರು ಪ್ರೇಮ ವಿವಾಹ

ಅಂಬೇಡ್ಕರ್ ಪ್ರತಿಮೆ ಎದುರು ಪ್ರೇಮ ವಿವಾಹ

ಅಂತರ್ಜಾತಿ ಪ್ರೇಮ ವಿವಾಹಕ್ಕೆ ಸಿಗದ ಪೋಷಕರ ಒಪ್ಪಿಗೆ

by Editor

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗಿರುವ ಅಂಬೇಡ್ಕ‌ರ್ ಪ್ರತಿಮೆ ಮುಂಭಾಗ ಶನಿವಾರ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯ ಮನೋಜ್ (22) ಹಾಗೂ ಮೂಕಲಿ ಗ್ರಾಮದ ಪ್ರೀತಿ (19) ಪರಸ್ಪರ ಹಾರ ಬದಲಾಯಿಸಿಕೊಂಡು, ಮಾಂಗಲ್ಯ ಧಾರಣೆ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು.

ಅವರಿಬ್ಬರದ್ದು ಪೋಷಕರ ಸಮ್ಮತಿ ದೊರಕದ ಅಂತರ್ಜಾತಿ ಪ್ರೇಮ ವಿವಾಹ. ಸುದ್ದಿಗಾರರೊಂದಿಗೆ ಮಾತನಾಡಿದ ನವದಂಪತಿ, ‘ಇಬ್ಬರೂ ನಮ್ಮ ಮನೆಯಿಂದ ಹೊರಬಂದು ಪರಸ್ಪರ ಒಪ್ಪಿ ವಿವಾಹವಾಗಿದ್ದೇವೆ. ಯಾರೂ ತೊಂದರೆ ಕೊಡಬಾರದು’ ಎಂದು ಮನವಿ ಮಾಡಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣಮೂರ್ತಿ, ಜಿಲ್ಲಾ ಸಂಚಾಲಕ ಕೇಶವಮೂರ್ತಿ, ಸಹಕಾರ್ಯದರ್ಶಿ ಅಶೋಕ್‌ ಮೊಸಳೆ, ಖಜಾಂಚಿ ರಮೇಶ್ ಪಾಲ್ಗೊಂಡಿದ್ದರು.

 

You may also like

Leave a Comment