ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಭಾಷಾ ಪತ್ರಿಕೆಯಲ್ಲಿ ಅನ್ಯ ದೇಶಿ ಪದಗಳನ್ನು ಗುರುತಿಸಿ ಎಂಬ ಪ್ರಶ್ನೆ ಇರುತ್ತದೆ. ನಾವು ಈಗ ಬಳಸುತ್ತಿರುವ ಕನ್ನಡ ಭಾಷೆಯಲ್ಲಿ ಬಹುತೇಕ ಅನ್ಯಭಾಷೆಯ ಪದಗಳು ಬಳಕೆಯಲ್ಲಿವೆ.
ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ಸಂಸ್ಕೃತ ಭಾಷೆ ನಿಧಾನವಾಗಿ ಕನ್ನಡವನ್ನು ಆಕ್ರಮಿಸುತ್ತಿದ್ದ ಕಾಲದಲ್ಲಿ.. ಕೇಶಿರಾಜ ಶಬ್ದಮಣಿದರ್ಪಣ ಎಂಬ ವ್ಯಾಕರಣ ಗ್ರಂಥ ಬರೆದು ಸಂಸ್ಕೃತ ಭಾಷೆಯನ್ನು ಶಿಷ್ಟಾಚಾರಕ್ಕೆ ಒಳಪಡಿಸಿ ಕನ್ನಡವನ್ನು ಕೀಳರಿಮೆಗೆ ತಳ್ಳಲು ಪ್ರಯತ್ನ ಮಾಡುವಾಗ ಅಂಡಯ್ಯನಂತಹ ಜೈನ ಸಾಹಿತಿಗಳು ಅಚ್ಚ ಕನ್ನಡದ ಸಾಹಿತ್ಯ ರಚಿಸುವ ಮೂಲಕ ಸಂಸ್ಕೃತಕ್ಕೆ ಸಡ್ಡು ಹೊಡೆದರು.
ಕನ್ನಡ ಕಟ್ಟುವಲ್ಲಿ ಹಾಸನ, ಹೊಯ್ಸಳರ ಎದೆಗಾರಿಕೆ ಹೀಗಿರುವಾಗ ಅಚ್ಚ ಕನ್ನಡದ ಪದಗಳನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ..
ಇದಕ್ಕೆ ಹಲವು ಬಗೆಯ ಮಾರ್ಗಗಳಿವೆ. ಅದರಲ್ಲಿ ಪ್ರಮುಖವಾಜವು ಇವು..
೧) ಕಿಟ್ಟೆಲ್ ನಿಘಂಟು ವಿನಲ್ಲಿ ಅಚ್ಚ ಕನ್ನಡ ದೇಸಿ ಶಬ್ದಗಳನ್ನು ದಪ್ಪಕ್ಷರಗಳಲ್ಲಿ ಮುದ್ರಿಸಲಾಗಿದೆ. ಅನ್ಯ ದೇಶ್ಯಗಳು ಮತ್ತು ಸಂಸ್ಕೃತ ಶಬ್ದಗಳನ್ನು ಸಣ್ಣ ಅಕ್ಷರಗಳಲ್ಲಿ ಮುದ್ರಿಸಿದ್ದಾರೆ. ಇದು ಕನ್ನಡ ಶಬ್ದಗಳನ್ನು ಕಂಡುಹಿಡಿಯಲು ರಾಜಮಾರ್ಗ.
೨) ಮಹಾಪ್ರಾಣ ಅಕ್ಷರಗಳು ದ್ರಾವಿಡ ಭಾಷೆಗಳಲ್ಲಿ ಇಲ್ಲ. ಕನ್ನಡವು ದ್ರಾವಿಡ ಭಾಷೆಯಾದ್ದರಿಂದ, ಕನ್ನಡದಲ್ಲಿರುವ ಮಹಾಪ್ರಾಣಾಕ್ಷರ ಶಬ್ದಗಳು ಕನ್ನಡ ಅಲ್ಲ.
೩) ಮೂರು ಅಕ್ಷರಗಳಿಂದ ಕೂಡಿದ + ಮಧ್ಯಾಕ್ಷರ ದೀರ್ಘವುಳ್ಳ ಅಖಂಡ (=ಸಮಾಸವಲ್ಲದ) ಶಬ್ದಗಳು ಕನ್ನಡ ಅಲ್ಲ.
ನನ್ನ ಉತ್ತರಕ್ಕೆ ಡಾ.ಆ.ರಾ.ಮಿತ್ರ ಅವರು ತಲೆದೂಗಿದರೆ, KPSC ಸದಸ್ಯರಾಗಿದ್ದ ಶ್ರೀಯುತ ನಾಯುಡಮ್ಮ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮೇಲ್ಕಂಡ ಔಪಚಾರಿಕ ಸಂದರ್ಶನದಲ್ಲಿ ನಾನು ಆಯ್ಕೆ ಆದೆನು. ಆದರೆ 1979 ರಿಂದಲೂ ಸ್ಥಳೀಯ ಅಭ್ಯರ್ಥಿ ಕನ್ನಡ ಉಪನ್ಯಾಸಕನಾಗಿ ಸೇವೆಯಲ್ಲಿದ್ದ ನನಗೆ, ಡಾ.ಜಿ.ಎಸ್.ಶಿವರುದ್ರಪ್ಪ ಅವರ ಪ್ರತಿಭಟನೆಯೇ ಕಾರಣವಾಗಿ, ಕೋರ್ಟ್ ಆದೇಶಾನುಸಾರ ಕೆಲಸ ಕೊಡಲೆಂದೇ ಕರೆದ ನಾಟಕೀಯ ಸಂದರ್ಶನವಿದು – ಎಂಬುದನ್ನು ಮರೆಯಬಾರದು.
– ವಿ.ಚಂದ್ರಶೇಖರ ನಂಗಲಿ: 22.05.26
~~~~~~~~~~~~~~~~~~~~~~~~~~~~~~~~~~~

