– ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಾರ್ಯಕ್ರಮ
– ಪಕ್ಷ ಕಟ್ಟಿದ ನಾಯಕರಿಗೆ ಸನ್ಮಾನ
ಹಾಸನ: ಜೆಡಿಎಸ್ ಪಕ್ಷ 25 ವರ್ಷ ಪೂರೈಸಿದ ಹಿನ್ನೆಲೆ ಹಾಸನದಲ್ಲಿ ರಜತಾ ಮಹೋತ್ಸವ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಜಿ ಶಾಸಕ ಲಿಂಗೇಶ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದವರು, ಜೆಡಿಎಸ್ ಕಳೆದ 25 ವರ್ಷಗಳಿಂದ ನಾಡು-ನುಡಿಗಾಗಿ ಶ್ರಮಿಸಿದ್ದಾಗಿ, ಪ್ರಾದೇಶಿಕ ಪಕ್ಷಗಳಿಂದ ಬೇರೆಯಾಗಿ ಎಲ್ಲ ಸಮುದಾಯಗಳ ಪರ ಹೋರಾಡಿದ ಜಾತ್ಯಾತೀತ ರಾಜಕೀಯ ಶಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಅನೇಕರು ಪ್ರಾದೇಶಿಕ ಪಕ್ಷವನ್ನು ನಿರ್ಮಿಸಲು ಯತ್ನಿಸಿದರೂ, ದೇವೇಗೌಡರು ಜೆಡಿಎಸ್‌ನ್ನು ಕಟ್ಟಿ ಬಳಸಿದ ನಾಯಕ ಎಂದು ಅವರು ಹೇಳಿದರು.
ನೆಲ-ಜಲ ಸೇರಿದಂತೆ ರಾಜ್ಯದ ಹಕ್ಕುಗಳ ವಿಚಾರದಲ್ಲಿ ದೇವೇಗೌಡರು ಶಕ್ತಿ ಮೀರಿ ಹೋರಾಡಿದ್ದಾರೆ ಎಂದು ಲಿಂಗೇಶ್ ನೆನಪಿಸಿದರು.
ಬುಧವಾರ ಮತ್ತು ಗುರುವಾರ ಬೆಂಗಳೂರಿನ ಜೆಪಿ ಭವನದಲ್ಲಿ ರಜತಾ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಹಾಸನ ಜಿಲ್ಲೆಯಿಂದ ಸಹಸ್ರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಶಾಸಕ ಎ. ಮಂಜು ಮಾತನಾಡಿ, ಜೆಡಿಎಸ್ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪಕ್ಷವಾಗಿದ್ದು, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಪಕ್ಷವನ್ನು ತಳಮಟ್ಟದಿಂದ ಬಲಪಡಿಸಿದಾಗನ್ನು ಹಿಗ್ಗೆ ವಿವರಿಸಿದರು.
ಪಕ್ಷವನ್ನು ಕಟ್ಟಲು ಶ್ರಮಿಸಿದ ನಾಯಕರಿಗೆ ಸನ್ಮಾನ ಕಾರ್ಯಕ್ರಮವೂ ಜರುಗಲಿದೆ ಎಂದು ಅವರು ತಿಳಿಸಿದರು.
ನವೆಂಬರ್ 21 ರಂದು ಸಂಜೆ ಧ್ವಜಾರೋಹಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ನವೆಂಬರ್ 22ರಂದು ಬೆಳಗ್ಗೆ ಮಹಾ ಸಮಾವೇಶ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಜಿಲ್ಲಾ ಅಧ್ಯಕ್ಷ ಎಸ್. ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಕಣದಳ್ಳಿ ಮಂಜೇಗೌಡ ಮತ್ತು ಮಾಧ್ಯಮ ವಕ್ತಾರ ರಘು ಹೊಂಗೆರೆ ಉಪಸ್ಥಿತರಿದ್ದರು.

