Home ಜಿಲ್ಲೆಹಾಸನ ಚನ್ನಕೇಶವನ ಹುಂಡಿಗೆ 3 ತಿಂಗಳಲ್ಲಿ 30 ಲಕ್ಷ

ಚನ್ನಕೇಶವನ ಹುಂಡಿಗೆ 3 ತಿಂಗಳಲ್ಲಿ 30 ಲಕ್ಷ

by Editor

ಬೇಲೂರು:  ಶ್ರೀ ಚನ್ನಕೇಶವ ಸ್ವಾಮಿ ದೇಗುಲದ ಹುಂಡಿಗೆ ಭಕ್ತರು ಮೂರು ತಿಂಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಹಣವನ್ನು ಹಾಕಿದ್ದಾರೆ.

ಹಣ ಎಣಿಕೆಯಲ್ಲಿ 37,79,346 ರೂ ಗಳು ಬಂದಿದ್ದು ಎರಡು ವಿದೇಶಿ ಹಣ ಹಾಗು ಚಿನ್ನ ಬೆಳ್ಳಿ ವಸ್ತುಗಳು ಕೂಡ ಈ ಬಾರಿ ಬಂದಿದೆ ಎಂದು ಮುಜರಾಯಿ ತಹಸೀಲ್ದಾರ್  ಲತಾ ತಿಳಿಸಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ (11-6-2025)ಹುಂಡಿ ಹಣವನ್ನು  ಎಣಿಸುವ ವೇಳೆ  36, 41,823 ರೂಗಳು ಬಂದಿತ್ತು . ಈ ಮೂರು ತಿಂಗಳಲ್ಲಿ ಒಂದು ಲಕ್ಷ ಹೆಚ್ಚುವರಿ ಸಂಗ್ಈರಹವಾಗಿದೆ.  ಹಣವನ್ನು ದೇವಾಲಯದ ಅಭಿವೃದ್ಧಿ ಗೆ ಹಾಗು ನೌಕರರ ವೇತನಕ್ಕೆ ಬಳಸಲಾಗುತ್ತದೆ ಎಂದರು.

ತಹಸೀಲ್ದಾರ್ ಶ್ರೀಧ‌ರ್ ಕಂಕನವಾಡಿ ಮಾತನಾಡಿ ರೈಲು ಭಕ್ತರು ಹಾಗು ಪ್ರವಾಸಿಗರು ಅವರ ಭಕ್ತಿಯ ಅನುಸಾರವಾಗಿ ಕಾಣಿಕೆ ರೂಪದಲ್ಲಿ ಬೇಲೂರಿನ ಸರ್ವೋದಯ ಶಾಲೆಯ ವಿದ್ಯಾರ್ಥಿಗಳು ಬ್ಯಾಂಕಿನ ಸಿಬ್ಬಂದಿ ಹಾಗು ದೇಗುಲದ ನೌಕರರ ವರ್ಗದವರು ಈ ಏಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದು ದಾಸೋಹದ ಹುಂಡಿ ಸೇರಿದಂತೆ ದೇಗುಲದ ಎಲ್ಲಾ ಹುಂಡಿಗಳ ಏಣಿಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಕಲೇಶಪುರ ಉಪವಿಭಾಗದ ಅಧಿಕಾರಿ ರಾಜೇಶ್, ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಯೋಗೇಶ್ ಇತರರು ಇದ್ದರು

You may also like

Leave a Comment