12
ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿ, ಬನ್ನೂರು ಗ್ರಾಮದ ನಟೇಶ್ ಕುಮಾರ್ ಮತ್ತು ವನಜಾಕ್ಷಿ ರವರ ಪುತ್ರಿ ಉಷಾ.ಬಿ.ಎನ್. ರವರ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕ್ಷೇತ್ರದ ಮಹೋನ್ನತವಾದ ಸಾಧನೆಯಿಂದ ರಾಜ್ಯಕ್ಕೆ ಕೀರ್ತಿಯನ್ನು ತಂದಿರುವುದನ್ನು ಗುರುತಿಸಿ ಕೇಂದ್ರ ಸರ್ಕಾರವು ನೀಡುವ 2023 ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನಮ್ಮ ಅರಕಲಗೂಡು ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಅರಕಲಗೂಡು ತಾಲೂಕಿನಾದ್ಯಂತ ಸಂಭ್ರಮ ಸಡಗರ ಮನೆಮಾಡಿದೆ.

