Home ಜಿಲ್ಲೆ ಹಾಸನ – ಅರಸೀಕೆರೆಗಳಲ್ಲಿ ಅಧಿಕಾರಿಗಳ ದಾಳಿ: ಹೋಟೆಲ್ ಗಳಲ್ಲಿ ಬಳಸುತ್ತಿದ್ದ ಗೃಹಬಳಕೆ ಸಿಲಿಂಡರ್ ವಶ

ಹಾಸನ – ಅರಸೀಕೆರೆಗಳಲ್ಲಿ ಅಧಿಕಾರಿಗಳ ದಾಳಿ: ಹೋಟೆಲ್ ಗಳಲ್ಲಿ ಬಳಸುತ್ತಿದ್ದ ಗೃಹಬಳಕೆ ಸಿಲಿಂಡರ್ ವಶ

by Editor

– ಹೋಟೆಲ್ ಗಳು ಮೇಲೆ ಪೊಲೀಸ್ ಠಾಣೆಯಲ್ಲಿ ದೂರು

ಹಾಸನ: ಇರಾನ್-ಇಸ್ರೇಲ್ ನಡುವಿನ ಯುದ್ದದ ಪರಿಣಾಮವಾಗಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹೋಟೆಲ್‌ ಹಾಗೂ ಬೇಕರಿಗಳು ಸಂಕಷ್ಟಕ್ಕೆ ಸಿಲುಕಿವೆ. ವಾಣಿಜ್ಯ ಸಿಲಿಂಡರ್‌ಗಳು ಲಭ್ಯವಾಗದ ಕಾರಣ ಕೆಲ ಹೋಟೆಲ್‌ಗಳು ಮತ್ತು ಬೇಕರಿಗಳು ಗೃಹಬಳಕೆ ಸಿಲಿಂಡರ್‌ಗಳನ್ನು ಬಳಕೆ ಮಾಡುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಹಾಸನ ಹಾಗೂ ಅರಸೀಕೆರೆ ಪಟ್ಟಣಗಳಲ್ಲಿ ದಾಳಿ ನಡೆಸಿದ್ದಾರೆ.

ಅರಸೀಕೆರೆ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕೇಕ್ ಪ್ಯಾಲೇಸ್ ಮೇಲೆ ಆಹಾರ ನಿರೀಕ್ಷಕಿ ಶುಭಶ್ರೀ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಗೃಹಬಳಕೆಗೆ ಮೀಸಲಾದ ಎರಡು ತುಂಬಿದ ಸಿಲಿಂಡರ್‌ಗಳು, ಒಂದು ಖಾಲಿ ಸಿಲಿಂಡ‌ರ್ ಹಾಗೂ ರೆಗ್ಯೂಲೇಟ‌ರ್ ಪ್ರಕರಣ ಸಂಬಂಧ ಸೋಮಶೇಖರ್ (35) ವಿರುದ್ಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ ಹಾಸನ ನಗರದಲ್ಲಿಯೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಆಹಾರ ನಿರೀಕ್ಷಕ ಜಗನ್ನಾಥ್ ನೇತೃತ್ವದಲ್ಲಿ ಗಜಾನನ ಹಾಗೂ ಅಲ್ ಅಮೀನ್ ಹೋಟೆಲ್‌ಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ವಾಣಿಜ್ಯ ಬಳಕೆ ಬದಲಿಗೆ ಗೃಹಬಳಕೆ ಸಿಲಿಂಡ‌ರ್ ಬಳಸುತ್ತಿರುವುದು ಪತ್ತೆ ಹಚ್ಚಿ ಎರಡು ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸಂಬಂಧಿತ ಹೋಟೆಲ್‌ಗಳ ವಿರುದ್ಧ ಪೊಲೀಸ್‌ ಠಾಣೆಗೆ ದೂರು ನೀಡಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಕಾನೂನುಬಾಹಿರವಾಗಿದ್ದು, ಮುಂದೆಯೂ ಇಂತಹ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ..

You may also like

Leave a Comment