15
ಗಂಗಾವತಿ (ಕೊಪ್ಪಳ ಜಿಲ್ಲೆ): ಇಲ್ಲಿನ ಕೊಪ್ಪಳ ರಸ್ತೆಯಲ್ಲಿ 2025ರಲ್ಲಿ ನಡೆದ ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರು ಜನ ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸಷೆನ್ ನ್ಯಾಯಾಲಯದಲ್ಲಿ ಗಲ್ಲು ಶಿಕ್ಷೆಯಾಗಿದೆ.
ರವಿ ಸಣ್ಣಬಸವರಾಜ, ವಿಜಯ್ ಅಲಿಯಾಸ್ ಮೈಲಾರಿ, ಧನರಾಜ, ಭೀಮ ಅಲಿಯಾಸ್ ಭರತ್, ಸಲೀಂ, ಗಂಗಾಧರ ಗೌಳಿ ಶಿಕ್ಷೆಗೆ ಒಳಗಾದವರು. 2025ರ ಅಕ್ಟೋಬರ್ 8ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ ಬೈಕಿಗೆ ಡಿಕ್ಕಿ ಹೊಡೆದು, ಕೆಳಗೆ ಬಿದ್ದ ನಂತರ ಮಚ್ಚು,ಲಾಂಗ್ ಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು.
ಈ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದ ನಂತರ 6 ತಿಂಗಳಲ್ಲಿ ವಾದ-ಪ್ರತಿವಾದದ ನಂತರ 83 ಸಾಕ್ಷಿಗಳನ್ನು ವಿಚಾರಿಸಿದ ನಂತರ, ಗುರುವಾರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

