Home ಅಪರಾಧ ಪತಿ – ಅತ್ತೆ ಕಿರುಕುಳ : ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

ಪತಿ – ಅತ್ತೆ ಕಿರುಕುಳ : ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

by Editor

– ದೂರು ನೀಡಿದರೂ ಕ್ರಮ ಕೈಗೊಳ್ಳದೇ ಪೊಲೀಸ್: ಪೋಷಕರ ಆರೋಪ

ಹಾಸನ: ಪತಿ ಮತ್ತು ಅತ್ತೆ ನೀಡಿದ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ನಡೆದಿದೆ.

ಮದುವೆಯಾದಾಗಿನಿಂದಲೂ ಕಿರುಕುಳ ಕೊಡುತ್ತಿದ್ದ ಗಂಡನ ನಡತೆಯಿಂದ ಬೇಸತ್ತ ಮಹಿಳೆ ಡೆತ್ ನೋಟ್ ಬರೆದಿಟ್ಟು, ಮಗು ಜೊತೆ ವಿಡಿಯೋ ಮಾಡಿ ನದಿಗೆ ಹಾರಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಸಾಲಿಗ್ರಾಮ ಮೂಲದ ಮಹಾದೇವಿ (29)ಸುಮಾರು ಮೂರು ವರ್ಷಗಳ ಹಿಂದೆ ಸೀಬಳ್ಳಿ ಗ್ರಾಮದ ಕುಮಾರ್ ಜೊತೆ ವಿವಾಹವಾಗಿದ್ದರು. ಮದುವೆಯ ನಂತರದಿಂದಲೇ ಪತಿ ಅನುಮಾನಪಟ್ಟು ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಲಾಗಿದೆ.

ಪತಿಯ ಕಿರುಕುಳ ತಾಳಲಾರದೆ 15 ದಿನಗಳ ಹಿಂದೆ ತವರು ಮನೆ ಸೇರಿದ್ದ ಅವರಿಗೆ ಫೋನ್ ಮತ್ತು ಮೆಸೇಜ್ ಮೂಲಕ ಕುಮಾ‌ರ್ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಲೇ ಇದ್ದ ಎಂದು ತಿಳಿದುಬಂದಿದೆ.

ನವೆಂಬರ್ 14 ರಂದು ಪತಿ ವಿರುದ್ಧ ದೂರು ನೀಡುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಮಹಾದೇವಿ, ಇದೀಗ ತನ್ನ ಪತಿ ಮತ್ತು ಅತ್ತೆಯೇ ತನ್ನ ಸಾವಿಗೆ ಕಾರಣವೆಂದು ಹೇಳಿ ಸೆಲ್ಫಿ ವೀಡಿಯೋ ಮಾಡಿ, ಡೆತ್‌ನೋಟ್ ಬರೆದು, ಮಗಳೊಂದಿಗೆ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

You may also like

Leave a Comment