Home ಜಿಲ್ಲೆಹಾಸನ ಸೆಪ್ಟೆಂಬರ್ ವೇಳೆಗೆ ರೈಲ್ವೆ ಮೇಲ್ಸೇತುವೆ ಸೇವೆಗೆ

ಸೆಪ್ಟೆಂಬರ್ ವೇಳೆಗೆ ರೈಲ್ವೆ ಮೇಲ್ಸೇತುವೆ ಸೇವೆಗೆ

by Editor

– ಜೂನ್ ಅಂತ್ಯಕ್ಕೆ ಮೇಲ್ಸೇತುವೆ ಸಂಚಾರಕ್ಕೆ ಸಿದ್ಧ

– ಆಗಸ್ಟ್ – ಸೆಪ್ಟೆಂಬರ್ ವೇಳೆಗಾದರೂ ಕಾಮಗಾರಿ ಮುಗಿಸಿ ಸಂಸದ ಸೂಚನೆ

ಹಾಸನ- ನಖರದ ಎನ್.ಆರ್. ವೃತ್ತದಿಂದ ಹೊಸ ಬಸ್ ನಿಲ್ದಾಣದವರೆಗಿನ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಶುಕ್ರವಾರ ಸಂಸದ ಶ್ರೇಯಸ್ ಎಂ.ಪಟೇಲ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ  ಸಂಸದ,2026ರ ಜೂನ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ನಿಗದಿತ ಗಡುವಿನೊಳಗೆ ಕೆಲಸ ಮುಗಿಸುವುದು ಅಸಾಧ್ಯ. ಜೂನ್ ಗೆ ಆಗದಿದ್ದರೆ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಕೆಲಸ ಮುಗಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎನ್.ಆರ್. ವೃತ್ತದಿಂದ ಬಲಭಾಗದಲ್ಲಿ ನಿಗದಿಪಡಿಸಿರುವ ಸರ್ವಿಸ್ ರಸ್ತೆ ಅವೈಜ್ಞಾನಿಕವಾಗಿದ್ದು ಮುಖ್ಯ ವೃತ್ತದಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಜಂಟಿ ಸರ್ವೆ ನಡೆಸಿ ವೈಜ್ಞಾನಿಕವಾಗಿ ಪರಿಹಾರ ಕ್ರಮದ ಕುರಿತು ವಾರದೊಳಗೆ ವರದಿ ಸಲ್ಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ‌ ಎಂದರು.
2026ರ ಜೂನ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ನಿಗದಿತ ಗಡುವಿನೊಳಗೆ ಕೆಲಸ ಮುಗಿಸುವುದು ಅಸಾಧ್ಯ. ಜೂನ್ ಗೆ ಆಗದಿದ್ದರೆ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಕೆಲಸ ಮುಗಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾತ್ರವಲ್ಲದೆ ಸುತ್ತಲಿನ ಜನರ ಸಮಸ್ಯೆಗಳಿಗೂ ಸ್ಪಂದಿಸಬೇಕಿದೆ ಎಂದರು.
ಕಾಮಗಾರಿಗೆ ಅನುದಾನದ ಕೊರತೆ ಇಲ್ಲ‌. ರಾಜ್ಯ ಸರ್ಕಾರ ತನ್ನ ಪಾಲಿನ 24 ಕೋಟಿ ರೂ‌.ಗಳನ್ನು ಬಿಡುಗಡೆ ಮಾಡಿದ ಬಳಿಕ ಕೆಲಸಕ್ಕೆ ಸಾಕಷ್ಟು ವೇಗ ಸಿಕ್ಕಿದೆ‌‌. ಆದಷ್ಟು ಶೀಘ್ರವಾಗಿ ಕೆಲಸ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

You may also like

Leave a Comment