Home ಅಪರಾಧ ಲೋಕಾ ಬಲೆಗೆ ಮಲ್ಲಿಪಟ್ಟಣ ಗ್ರಾಪಂ ಬಿಲ್ ಕಲೆಕ್ಟರ್

ಲೋಕಾ ಬಲೆಗೆ ಮಲ್ಲಿಪಟ್ಟಣ ಗ್ರಾಪಂ ಬಿಲ್ ಕಲೆಕ್ಟರ್

ಇ-ಸ್ವತ್ತು ನೀಡಲು 50000 ರೂಂ. ಲಂಚ್ ಪಡೆದ ಪ್ರಕರಣ

by Editor

ಅರಕಲಗೂಡು: ಇ- ಸ್ವತ್ತು ನೀಡಲು  48 ಸಾವಿರ ರೂ. ಲಂಚ ಪಡೆಯುತ್ತಿದ್ದ  ತಾಲೂಕಿನ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್  ಅನ್ನು  ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ವಾಸ ಇರುವ ಮಲ್ಲಿಪಟ್ಟಣ ಗ್ರಾಮದ ಸೋಮಶೇಖರ್ ಮಲ್ಲಿಪಟ್ಟಣ ಗ್ರಾಮದಲ್ಲಿ ಮನೆ ಹೊಂದಿದ್ದಾರೆ. ಆ ಮನೆಯನ್ನು ಮಾರಾಟ ಮಾಡಲು  ಇ-ಸ್ವತ್ತು ಮಾಡಿಕೊಡಲು 2026ರ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇ- ಸ್ವತ್ತು ಮಾಡುವ ಮೊದಲು ಭೂ ಪರಿವರ್ತನೆ ಮಾಡಬೇಕು ಎಂದು 50 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ 2000 ರೂಂ. ಮುಂಗಡ ನೀಡಿ ಉಳಿದ ಹಣವನ್ನು ಇಂದು ನೀಡುವುದಾಗಿ ಸೋಮಶೇಖರ್ ತಿಳಿಸಿದ್ದಾರೆ. ಪೂರ್ಣ ಹಣ ನೀಡಿದ ಮೇಲೆ ಇ-ಸ್ವತ್ತು ದೃಢೀಕರಣ ಪತ್ರ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಸೋಮಶೇಖರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಇಂದು ( ಮೇ 21) ಉಳಿದ ಹಣದ ಜೊತೆ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಕಚೇರಿಗೆ ಬಂದಿದ್ದಾರೆ. ಹಣವನ್ನು ಬಿಲ್ ಕಲೆಕ್ಟರ್ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಶಿಲ್ಪಾ ನೇತೃತ್ವದ ತಂಡ ಹರೀಶ್ ಅವರನ್ನು ವಶಕ್ಕೆ ಪಡೆದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೇಡಿಕೆ ಇಟ್ಟಿದ್ದು ಪಿಡಿಒ; ಆದರೆ ಬಲೆಗೆ ಬಿದ್ದಿದ್ದು ಬಿಲ್ ಕಲೆಕ್ಟರ್

ಈ ಪ್ರಕರಣದಲ್ಲಿ ವಾಸ್ತವವಾಗಿ ಬಲೆಗೆ ಬೀಳಬೇಕಿದ್ದುದು ಪಿಡಿಒ ಅರುಣ್ ಕುಮಾರ್. ಆದರೆ ಬಲೆಗೆ ಬಿದ್ದುದು ಬಿಲ್ ಕಲೆಕ್ಟರ್ ಹರೀಶ್. ಇ- ಸ್ವತ್ತು ನೀಡಲು 50, 000ಫಿಕ್ಸ್ ಮಾಡಿದ್ದು ಪಿಡಿಒ. ಈ ಬಗ್ಗೆ ಸೋಮಶೇಖರ್ ಹಲವು ಬಾರಿ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಗುರುವಾರವೂ ಕೂಡ ಸೋಮಶೇಖರ್ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಪಿಡಿಒ ಗೆ ಕರೆ ಮಾಡಿದ್ದಾರೆ. ನಾನು ರುದ್ರಪಟ್ಟಣದಲ್ಲಿದ್ದೇನೆ. ಬಿಲ್ ಕಲೆಕ್ಟರ್ ಗೆ ಹಣ ನೀಡಿ ಹೋಗಿ ಸಂಜೆ ವೇಳೆಗೆ ಇ-ಸ್ವತ್ತು ಸಿದ್ದವಾಗಿರುತ್ತದೆ ಎಂದು ಹೇಳಿದ್ದಾರೆ. ನಂತರವೇ ಸೋಮಶೇಖರ್ ಬಿಲ್ ಕಲೆಕ್ಟರ್ ಗೆ ಹಣ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಿಡಿಒ ಮೊಬೈಲ್ ಫೋನ್ ಸ್ವಿಚ್ ಆಫ್

ಬಿಲ್ ಕಲೆಕ್ಟರ್ ನನ್ನು ಬಲೆಗೆ ಬೀಳಿಸಿದ ನಂತರ ಲೋಕಾ ಪೊಲೀಸರು ಅರಕಲಗೂಡು ಇಒಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಇಒ ಪಿಡಿಒ ಗೆ ಕರೆ ಮಾಡಿ ಮಲ್ಲಿಪಟ್ಟಣ ಪಂಚಾಯಿತಿಗೆ ಹೋಗುತ್ತಿದ್ದು ಬರುವಂತೆ ಸೂಚಿಸಿದ್ದಾರೆ. ಬಳಿಕ ಪಂಚಾಯಿತಿ ಮಾಜಿ ಸಿಬ್ಬಂದಿಯೊಬ್ಬರು ಪಿಡಿಒಗೆ ಕರೆ ಮಾಡಿ ಮಾಹಿತಿ ತಿಳಿಸಿದ ನಂತರ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ.

You may also like

Leave a Comment