17
– ಮಹಮ್ಮದ್ ಸುಜೀತಾ ಬೆಂಗಳೂರಿಗೆ ವರ್ಗ
ಹಾಸನ: ಜಿಲ್ಲೆಯ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಶುಭನ್ವಿತಾ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದುವರೆಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಮಹಮ್ಮದ್ ಸುಜೀತಾ ಎಂ.ಎಸ್
ಅವರನ್ನು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇವರ ಸ್ಥಾನಕ್ಕೆ ಸಿಐಡಿ ಎಸ್ ಪಿ ಆಗಿದ್ದ ಶುಭನ್ವಿತಾ ಅವರನ್ನು ನೇಮಿಸಿದೆ.

