Home ರಾಜ್ಯ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರಾಗಿ ಬಸವರಾಜ ಪುನರಾಯ್ಕೆ

ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರಾಗಿ ಬಸವರಾಜ ಪುನರಾಯ್ಕೆ

by Editor

– ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ, ಹಣಕಾಸು ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಆಯ್ಕೆ

ಕೋಲಾರ: ಕರ್ನಾಟಕ ಪ್ರಾಂತ ರೈತ ಸಂಘದ  ರಾಜ್ಯ ಅಧ್ಯಕ್ಷರಾಗಿ ಯು. ಬಸವರಾಜ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಟಿ.ಯಶವಂತ ಪುನರಾಯ್ಕೆಯಾಗಿದ್ದಾರೆ.

ಕೋಲಾರದಲ್ಲಿ ನಡೆದ ಪ್ರಾಂತರೈತಸಂಘದ 18ನೇ ಸಮ್ಮೇಳನದಲ್ಲಿ 37 ಜನರ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದೆ. ನೂತನ ರಾಜ್ಯ ಸಮಿತಿ ಅಧ್ಯಕ್ಷರಾಗಿ ಯು. ಬಸವರಾಜ, ಉಪಾಧ್ಯಕ್ಷರಾಗಿ ಶಾಂತಾರಾಮ‌ನಾಯ್ಕ್ , ಪಿ.ಆರ್.ಸೂರ್ಯನಾರಾಣ,  ಪ್ರಭ ಬೆಳವಂಗಲ,  ಚನ್ನಪ್ಪ ಆನೆಗುಂದಿ,  ಚನ್ನರಾಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ.ಟಿ, ಸಹ ಕಾರ್ಯದರ್ಶಿಗಳಾಗಿ, ಎನ್.ಎಲ್‌.ಭರತ್ ರಾಜ್,  ನರಸಣ್ಣ ನಾಯಕ,  ಗಂಗಮ್ಮ,  ಉಮೇಶ್ ಬಿ, ಹಣಕಾಸು ಕಾರ್ಯದರ್ಶಿ – ಹೆಚ್.ಆರ್.ನವೀನ್ ಕುಮಾರ್ ಆಯ್ಕೆ ಆಗಿದ್ದಾರೆ.

You may also like

Leave a Comment